ವಿಶ್ವರೂಪಂ ೨೦೧೩ರ ಕಮಲ್ ಹಾಸನ್ ಬರೆದು, ನಿರ್ದೇಶಿಸಿ, ಸಹ-ನಿರ್ಮಾಪಿಸಿ, ಹಾಗು ನಾಯಕ ನಟನಾಗಿ ಅಭಿನಯಿಸಿರುವ ತಮಿಳ್ ಮತ್ತು ಹಿಂದಿ ಭಾಷೆಗಳ ಸ್ಪೈಥ್ರಿಲ್ಲೆರ್ ಚಿತ್ರ.ಹಾಸನಲ್ಲದೆ ಈ ಚಿತ್ರದಲ್ಲಿ ರಾಹುಲ್ ಬೋಸ್, ಶೇಖರ್ ಕಪೂರ್, ಆಣ್ಡ್ರಿಯಾ ಜೆರೆಮೈಯಾ, ಮತ್ತು ಪೂಜಾ ಕುಮಾರ್ ನಟಿಸಿದ್ದರೇ.ತೆಲಗುನಲ್ಲಿಯೂ ಈ ಚಿತ್ರ ಅನುವಾದವಾಗಿದೆ.ಈ ಚಿತ್ರಕ್ಕೆ ವೈರಮುತು ಮತ್ತು ಕಮಲ್ ಹಾಸನ್ ಸಂಗೀತಸಾಹಿತ್ಯ ಕೊಟ್ಟು ಶಂಕರ್-ಎಹ್ಸಾನ್-ಲಾಯ್ ಸಂಗೀತ ನಿರ್ದೇಶನ ಮಾಡಿದ್ದರೆ.ಈ ಚಿತ್ರಕ್ಕೆ ೯೫ಕೋಟಿ ಖರ್ಚು ಮಾಡಲಾಗಿದ್ದು ೨೦೦+ಕೋಟಿ ಗಳಿಸಿತು. ಈ ಚಿತ್ರ ೨೫ ಜನವರೀ ೨೦೧೩ರಂದು ತಮಿಳ್ನಲ್ಲಿ ಬಿಡುಗಡೆಯಾಗಿ, ಹಿಂದಿಯಲ್ಲಿ ೨ ಫೆಬ್ರವರಿ ೨೦೧೩ರಂದು ಬಿಡುಗಡೆಯಾಯಿತು.ಇದಕ್ಕೆ ನ್ಯಾಷಿನಲ್ ಫಿಲಮ್ ಅವಾರ್ಡ್ಸ್ನಲ್ಲಿ 'ಅತ್ಯುತ್ತಮ ಕಲಾ ನಿರ್ದೇಶನ' ಮತ್ತು 'ಅತ್ಯುತ್ತಮ ನೃತ್ಯ ನಿರ್ದೇಶನ' ಲಭ್ದವಾಗಿದೆ. == ಕಥೆ == ವಿಶ್ವರೂಪಂ ಒಂದು ಸ್ಪೈ-ಥ್ರಿಲ್ಲರ್ ಕಥೆ. ಅಫ್ಘಾನಿಸ್ಥಾನ್ನ ಭಯೋತ್ಪಾದಕನಾದ ಒಮರ್ ಕುರೇಶಿ ಅಮೇರಿಕಾದಲ್ಲಿ ಬಾಂಬ್ ಗಳನ್ನು ಇಟ್ಟಾಗ ಭಾರತೀಯ ರಾ(ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್)ಏಜೆಂಟ್ ವಿಸಾಮ್ ಅಹ್ಮೆದ್ ಕಶ್ಮೀರಿ ಅದನ್ನು ತಪ್ಪಿಸುವ ಕಥೆ ಇದು. == ನಟರು == ವಿಸಾಮ್ ಅಹ್ಮೆದ್ ಕಶ್ಮೀರಿ/ವಿಶ್ವನಾಥ್ ಆಗಿ ಕಮಲ್ ಹಾಸನ್ ಒಮರ್ ಕುರೇಶಿಯಾಗಿ ರಾಹುಲ್ ಬೋಸ್ ಕೊಲೋನೆಲ್ ಜಗನ್ನಾಥ್ ಆಗಿ ಶೇಖರ್ ಕಪೂರ್ ನಿರುಪಮಳಾಗಿ ಪೂಜ ಕುಮಾರ್ ಅಶ್ಮಿತಾಳಾಗಿ ಆಣ್ಡ್ರಿಯಾ ಜೆರೆಮೈಯಾ ಸಲೀಮ್ ಆಗಿ ಜಯದೀಪ್ ಅಹತ್ವಾಲ್ ದೀಪಕ್ ಚಾಟರ್ಜೀಯಾಗಿ ಸಾಮ್ರಾಟ್ ಚಕ್ರಬರ್ತಿ ನಾಸರ್ ಆಗಿ ನಾಸರ್ ಡಾಕಿನ್ಸ್ ಆಗಿ ಮೈಲ್ಸ್ ಆಂಡೆರ್ಸನ್ ತೌಫೀಕ್ ಆಗಿ ಹಯತ್ ಅಸಿಫ್ == ಸಂಗೀತ == ಚಿತ್ರದ ಸಂಗೀತವನ್ನು ಶಂಕರ್-ಎಹ್ಸಾನ್-ಲಾಯ್ ನಿರ್ದೇಶಿಸಿದ್ದರೆ.ಸಂಗೀತಸಾಹಿತ್ಯನವನ್ನು ವೈರಮುತು ಮತ್ತು ಕಮಲ್ ಹಾಸನ್ ಬರೆದಿದ್ದು, ಹಿಂದಿಯಲ್ಲಿ ಜಾವೇದ್ ಅಕ್ತರ್ ಬರೆದಿದ್ದರೆ.: == ಉಲ್ಲೇಖಗಳು ==